ಬಿಸಿ ಬೆಳೆ ಬಾತ್ ಪೌಡರ್ ಮಾಡುವ ಅತ್ಯಂತ ಸರಳ ವಿಧಾನ

Deepa Easy Home Recipe

ಬೇಕಾಗುವ ಸಾಮಗ್ರಿಗಳು:-
2 ಸ್ಪೂನ್ ಕಡ್ಲೆಬೆಳೆ
2 ಸ್ಪೂನ್ ಉದ್ದಿನಬೆಳೆ
1 ಸ್ಪೂನ್ ಜಿರಿಗೆ
1 ಸ್ಪೂನ್ ಕಾಳುಮೆಣಸು
5 ಏಲಕ್ಕಿ, ಲವಂಗ & ಸ್ವಲ್ಪ ಚಕ್ಕೆ
1/2 ಕಪ್ ದನಿಯಾ ಕಾಳು
1 ಸ್ಪೂನ್ ಕಪ್ಪು ಎಳ್ಳು
10-15 ಬ್ಯಾಡಗಿ ಒಣ ಮೆಣಸಿನಕಾಯಿ

ಮಾಡುವ ವಿಧಾನ:-
ಮೊದಲು ಒಂದು ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಸ್ಪೂನ್ ಎಣ್ಣೆ ಬಿಸಿ ಮಾಡಿ ನಂತರ 2 ಸ್ಪೂನ್ ಕಡ್ಲೆಬೆಳೆ,2 ಸ್ಪೂನ್ ಉದ್ದಿನ ಬೆಳೆ, 1 ಸ್ಪೂನ್ ಜಿರಿಗೆ, 1 ಸ್ಪೂನ್ ಕಾಳುಮೆಣಸು, 5 ಏಲಕ್ಕಿ, 5ಲವಂಗ, ಸ್ವಲ್ಪ ಚಕ್ಕೆ & 1/2 ಕಪ್ ದನಿಯಾ ಕಾಳು ಹಾಕಿ ಎಲ್ಲವನ್ನು ಕೆಂಪಗಾಗುವ ವರೆಗೂ ಹುರಿದು ಕೊನೆಯಲ್ಲಿ 1 ಸ್ಪೂನ್ ಕಪ್ಪು ಅಥವಾ ಬಿಳಿ ಎಳ್ಳನ್ನು ಹಾಕಿ ಹುರಿದು ತಣ್ಣಗಾಗಲು ಬಿಡಿ. ನಂತರ ಅದೇ ಪಾತ್ರೆಗೆ 10-15 ಬ್ಯಾಡಗಿ ಒಣ ಮೆಣಸಿನಕಾಯಿ ಯನ್ನು ಹಾಕಿ ಸ್ವಲ್ಪ ಬಿಸಿಮಾಡಿ ತಣ್ಣಗಾಗಲು ಬಿಡಿ. ಪೂರ್ತಿ ಯಾಗಿ ತಣ್ಣಗಾದ ಮೇಲೆ ಮಿಕ್ಸಿ ಜಾರಿಯಲ್ಲಿ ಹಾಕಿ ನುಣ್ಣಗಾಗುವ ವರೆಗೂ ಪುಡಿ ಮಾಡಿದರೆ ಮನೆಯಲ್ಲೆ ತುಂಬ ಸುಲಭವಾಗಿ ಬಿಸಿಬೆಳೆ ಬಾತ್ ಪೌಡರ್ ರೆಡಿ .

Review Your Cart
0
Add Coupon Code
Subtotal