ಬೇಕಾಗುವ ಸಾಮಗ್ರಿಗಳು:-
2 ಕಪ್ ಅಕ್ಕಿ ಹಿಟ್ಟು
1 ಕಪ್ ತುರದಿರೋ ಕ್ಯಾರೆಟ್
1 ಕಪ್ ಕತ್ತರಿಸಿದ ಈರುಳ್ಳಿ
1/2ಕಪ್ ತುರದಿರೋ ಬಿಟರುಟ್
2 ಹಸಿಮೆಣಸಿನಕಾಯಿ
1 ಸ್ಪೂನ್ ಜಿರಿಗೆ
ಕೊತಂಬರಿ ಸೊಪ್ಪು
ನೀರು
2 ಸ್ಪೂನ್ ಎಣ್ಣೆ
2 ಸ್ಪೂನ್ ತುಪ್ಪ
ಮಾಡುವ ವಿಧಾನ:-
ಮೊದಲು ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 1 ಕಪ್ ನೀರು ಬಿಸಿಮಾಡಿ ನಂತರ ರುಚಿಗೆ ತಕ್ಕಷ್ಟು ಉಪ್ಪು & 2 ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿ ಗಂಟು ಇರದ ಹಾಗೆ ಕಲಿಸಿ ತಣ್ಣಗಾಗಲು ಬಿಡಿ. ನಂತರ ಒಂದು ಬೌಲನಲ್ಲಿ 2 ಕಪ್ ಅಕ್ಕಿ ಹಿಟ್ಟು,1 ಕಪ್ ತುರದಿರೋ ಕ್ಯಾರೆಟ್, 1/2 ಕಪ್ ತುರದಿರೋ ಬಿಟರುಟ್, 1 ಕಪ್ ಕತ್ತರಿಸಿದ ಈರುಳ್ಳಿ, 2 ಕತ್ತರಿಸಿದ ಹಸಿಮೆಣಸಿನಕಾಯಿ, 1 ಸ್ಪೂನ್ ಜಿರಿಗೆ, ಸ್ವಲ್ಪ ಕತ್ತರಿಸಿದ ಕೊತಂಬರಿ ಸೊಪ್ಪು & ರುಚಿಗೆ ತಕ್ಕಷ್ಟು ಉಪ್ಪು ನ್ನು ಹಾಕಿ ಎಲ್ಲವನ್ನು ಕಲಿಸಿ ನಂತರ ಮುಂಚೆನೆ ಬೇಯಿಸಿದ ಅಕ್ಕಿಹಿಟ್ಟನ್ನು ಹಾಕಿ ಕಲಿಸಿ ಸ್ವಲ್ಪ-ಸ್ವಲ್ಪ ನೀರನ್ನು ಹಾಕಿ ಗಟ್ಟಿಯಾಗಿ ಕಲಿಸಿ ನಂತರ ಸ್ವಲ್ಪ ಹಿಟ್ಟನ್ನು ತಗೊಂಡು ಒಂದು ಉಂಡೆ ಮಾಡಿ ಆ ಉಂಡೆ ಯನ್ನು ಬಟರ ಪೇಪರ್ ಮೇಲೆ, ಎಣ್ಣೆ ಪಾಕೆಟ ಮೇಲೆ ಅಥವಾ ಒಬ್ಬಟ್ಟಿನ ಶೀಟ ಮೇಲೆ ಇಟ್ಟು ಅದಕ್ಕೆ ಎರಡು ಕಡೆಗೂ ಸ್ವಲ್ಪ ಎಣ್ಣೆ ಹಚ್ಚಿ ಅದರ ಮೇಲೆ ಒಂದು ಹಾಳೆ ಇಟ್ಟು ಚಪಾತಿ ತರ ನಿಮಗ ಎಷ್ಟ ತೆಳ್ಳಗ ಬೇಕೋ ಅಷ್ಟು ತೆಳ್ಳಗೆ ಲಟ್ಟಿಸಿ ಕಾದಿರುವಂತ ತವಾ ಮೇಲೆ ಹಾಕಿ ಮೇಲೆ ತುಪ್ಪ ಹಚ್ಚಿ ಎರಡು ಕಡೆಗೂ ಬೇಯಿಸಿದರೆ ಮೆತ್ತನೆಯ ರುಚಿಕರವಾದ ಮಸಾಲಾ ಅಕ್ಕಿ ರೊಟ್ಟಿ ಸವಿಯಲು ಸಿದ್ಧ.

