ಒಂದು ಸಲ ಈ ತರ ಟೊಮೆಟೊ ಬಾತ್ ಟ್ರೈ ಮಾಡಿ ಟೊಮೆಟೊ ಬಿರಿಯಾನಿ ಗಿಂತಲೂ👌 ಆಗಿರುತ್ತೆ 😋😋

ಬೇಕಾಗಿರುವ ಸಾಮಾಗ್ರಿಗಳು:
1 ಕಪ್ ಬಾಸ್ಮತಿ ಅಕ್ಕಿ
3 ಟೊಮೆಟೊ
2-3 ಬೆಳ್ಳುಳ್ಳಿ
2-4 ಒಣ ಮೆಣಸಿನಕಾಯಿ
2 ಏಲಕ್ಕಿ
2 ಲವಂಗ
2 ಮರಾಠ ಮೊಗ್ಗು
1 ಪಲಾವ್ ಎಲೆ
1/2 ಸ್ಪೂನ್ ಜೀರಿಗೆ
1 ಸ್ಪೂನ್ ದನಿಯಾ ಪೌಡರ್
1/2 ಸ್ಪೂನ್ ಗರಮ್ ಮಸಾಲ
ಅಡುಗೆ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:

ಒಂದು ಪಾತ್ರೆಗೆ ಒಂದು ಕಪ್ ನೀರು ಹಾಕಿ ಬಿಸಿ ಮಾಡಿ ನಂತರ ಅದಕ್ಕೆ 3 ಟೊಮೆಟೊ ಬೆಳ್ಳುಳ್ಳಿ ಮತ್ತು ಬ್ಯಾಡಗಿ ಮೆಣಸಿನ ಕಾಯಿಯನ್ನು ಕುದಿಯುತ್ತಿರುವ ನೀರಿನಲ್ಲಿ ಹಾಕಿ ಪಾತ್ರೆಯನ್ನು ಮುಚ್ಚಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಬೇಯಿಸಿ

ತಣ್ಣಗಾದ ಮೇಲೆ ಟೊಮೆಟೊ ಸಿಪ್ಪೆಯನ್ನು ಬಿಡಿಸಿ ನಂತರ ಎಲ್ಲವನ್ನೂ ಮಿಕ್ಸಿ ಜಾರನಲ್ಲಿ ಹಾಕಿ ಸ್ವಲ್ಪ ಶುಂಠಿ ಸೇರಿಸಿ ರುಬ್ಬಿ.

ನಂತರ ಒಲೆ ಮೇಲೆ ಕುಕ್ಕರ್ ಇಟ್ಟು 3 ಸ್ಪೂನ್ ಅಡುಗೆ ಎಣ್ಣೆ ಹಾಕಿ ಬಿಸಿ ಮಾಡಿಕೊಳ್ಳೊಣ ನಂತರ ಅದಕ್ಕೆ ಎರಡು ಏಲಕ್ಕಿ, ಎರಡು ಲವಂಗ, ಎರಡು ಮರಾಠ ಮೊಗ್ಗು, ಒಂದು ಪಲಾವ್ ಎಲೆ ಮತ್ತು ಅರ್ಧ ಸ್ಪೂನ್ ಜೀರಿಗೆ ಹಾಕಿ ಮಿಶ್ರಣ ಮಾಡಿ. ನಂತರ ಒಂದು ಕಪ್ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೂ ಪ್ರೈ ಮಾಡಿ ನಂತರ ರುಬ್ಬಿರುವ ಮಸಾಲೆ ಹಾಕಿ ಮಿಶ್ರಣ ಮಾಡಿ.

ಈಗ ಇದರಲ್ಲಿ ಒಂದು ಸ್ಪೂನ್ ದನಿಯಾ ಪೌಡರ್, ಅರ್ಧ ಸ್ಪೂನ್ ಗರಮ್ ಮಸಾಲ ಪೌಡರ್ ನಂತರ ರುಚಿಗೆ ತಕ್ಕಷ್ಟು ಉಪ್ಪು ಬೇಕಾದರೆ ಒಂದು ಸ್ಪೂನ್ ಸಕ್ಕರೆ ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಇದರಲ್ಲಿ ಒಂದು ಕಪ್ ಬಾಸ್ಮತಿ ಅಕ್ಕಿ ಹಾಕಿ ಒಂದೂವರೆ ಕಪ ನಷ್ಟು ನೀರು ಹಾಕಿ ಕುಕ್ಕರ್ ಮುಚ್ಚಿ ಬೇಸಿಸಿದರೆ ರುಚಿಕರವಾದ ಟೊಮೆಟೊ ಬಾತ್ ಸವಿಯಲು ಸಿಧ್ದ.

Leave a Reply

Your email address will not be published. Required fields are marked *

Review Your Cart
0
Add Coupon Code
Subtotal