ಬೇಕಾಗಿರುವ ಸಾಮಗ್ರಿಗಳು:-
1 ಕಪ್ ಚಿರೋಟಿ ರವಾ
3ಸ್ಪೂನ್ ಎಣ್ಣೆ
1 ಸ್ಪೂನ್ ಕಡ್ಲೆಬೆಳೆ
1 ಸ್ಪೂನ್ ಉದ್ದಿನಬೆಳೆ
2 ಹಸಿಮೆಣಸಿನಕಾಯಿ
1 ಸ್ಪೂನ್ ಶುಂಠಿ
1/4 ಕಪ್ ಗೊಡಂಬಿ
ಕತ್ತರಿಸಿದ ಕರಿಬೇವು
1 ಕಪ್ ಮೊಸರು
ರುಚಿಗೆ ತಕ್ಕಷ್ಟು ಉಪ್ಪು
ಕೊತಂಬರಿ ಸೊಪ್ಪು
1 ಕಪ್ ನೀರು
1/2 ಸ್ಪೂನ್ ಅಡುಗೆ ಸೋಡಾ
ತುರದಿರೋ ಕ್ಯಾರೆಟ್
Your Attractive Heading
ಮಾಡುವ ವಿಧಾನ:-
ಮೊದಲು ಒಲೆಯ ಮೇಲೆ ಒಂದು ಪಾತ್ರೆಯಲ್ಲಿ 2 ಸ್ಪೂನ್ ಎಣ್ಣೆ ಬಿಸಿ ಮಾಡಿ 1 ಸ್ಪೂನ್ ಕಡ್ಲೆಬೆಳೆ, 1 ಸ್ಪೂನ್ ಉದ್ದಿನಬೆಳೆ, 2 ಕತ್ತರಿಸಿದ ಹಸಿಮೆಣಸಿನಕಾಯಿ, 1/2 ಸ್ಪೂನ್ ತುರದಿರೋ ಶುಂಠಿ, 1/4 ಕಪ್ ಗೊಡಂಬಿ, ಕತ್ತರಿಸಿದ ಕರಿಬೇವು & 1 ಕಪ್ ಚಿರೋಟಿ ರವೆ ಹಾಕಿ ಎಲ್ಲವನ್ನು ಹುರಿದು ತಣ್ಣಗಾಗಲು ಬಿಡಿ .ಪೂರ್ತಿ ತಣ್ಣಗಾದ ಮೇಲೆ ಒಂದು ಮಿಕ್ಸಿಂಗ ಬೌಲಗೆ ಹಾಕಿ ನಂತರ 1 ಕಪ್ ಮೊಸರು 1/2 ಸ್ಪೂನ್ ಅಡುಗೆ ಸೋಡಾ & ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನು ನೀಟಾಗಿ ಕಲಿಸಿ ಎಣ್ಣೆ ಸವರಿದ ಇಡ್ಲಿ ಪ್ಲೆಟಿಗೆ ತುರದಿರೋ ಕ್ಯಾರೆಟ್ & 1 ಗೊಡಂಬಿ ಪೀಸನ್ನು ಇಟ್ಟು ನಂತರ ಮುಂಚೆ ಕಲಿಸಿದ ಹಿಟ್ಟನ್ನು ಹಾಕಿ ನಂತರ ನೀರು ಬಿಸಿಮಾಡಿದ ಇಡ್ಲಿ ಪಾತ್ರೆಯಲ್ಲಿಟ್ಟು ಮೇಲಿಂದ ಮುಚ್ಚಿ 8-10 ನಿಮಿಷಗಳ ಕಾಲ ಬೇಯಿಸಿದರೆ ರುಚಿಕರವಾದ ಮಸಾಲ ಇಡ್ಲಿ ಸವಿಯಲು ಸಿದ್ಧ .
